ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ನೆರೆ ಪರಿಹಾರ ನಿಧಿಗೆ ರೂ 2 ಕೋಟಿ ರೂ.

Monday, August 20th, 2018
subramanya

ಸುಬ್ರಹ್ಮಣ್ಯ : ಅತಿವೃಷ್ಟಿ ಕಡಿಮೆಯಾಗಿ ಪ್ರಕೃತಿ ಶಾಂತಗೊಂಡು ಜನರು, ಪಶು ಪಕ್ಷಿ ಸಂಕುಲ ಶಾಂತಿಯುತವಾಗಿ ಸುಖ, ನೆಮ್ಮದಿಯಿಂದ ಜೀವನ ನಡೆಸಲು ಕೃಪೆ ತೋರುವಂತೆ ಕುಕ್ಕೆ ದೇವರ ಸಾನ್ನಿಧ್ಯದಲ್ಲಿ ಭಾನುವಾರ ಪ್ರಾರ್ಥಿಸಲಾಯಿತು. ಈ ಪ್ರಾರ್ಥನೆಯ ಪ್ರಕಾರ ಸುಬ್ರಹ್ಮಣ್ಯ ದೇವರಿಗೆ 108 ಸೀಯಾಳಾಭಿಷೇಕ ಸೇವೆಯನ್ನು ಆ.21ರಂದು ಬೆಳಗ್ಗೆ 5 ಗಂಟೆಗೆ ನಡೆಸಲಾಗುವುದು. ಅಭಿಷೇಕಕ್ಕೆ ಸೀಯಾಳ ಒದಗಿಸುವ ಭಕ್ತರು ಸೋಮವಾರ ಸಂಜೆಯ ಒಳಗೆ ಶ್ರೀ ದೇವಳದ ಕಚೇರಿಗೆ ಸೀಯಾಳ ಒದಗಿಸಬಹುದು ಎಂದು ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ […]

ಬೆಳ್ತಂಗಡಿ ತಾಲೂಕಿನ ಬಿಷಪ್ ಹೌಸ್​ನಿಂದ 7 ಲೋಡ್​ಗಳಲ್ಲಿ ನೆರೆ ಪರಿಹಾರ..!

Monday, August 20th, 2018
church

ಮಂಗಳೂರು: ಕೇರಳದಲ್ಲಿ ನೆರೆ ಪ್ರವಾಹ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಿಷಪ್ ಹೌಸ್ನಿಂದ 7 ಲೋಡ್ಗಳಲ್ಲಿ ನೆರೆ ಪರಿಹಾರ ಸಾಮಾಗ್ರಿಗಳನ್ನು ಕೇರಳಕ್ಕೆ ರವಾನಿಸಲಾಗಿದೆ. ಬೆಳ್ತಂಗಡಿಯ ಕರ್ನಾಟಕ ಸೀರೊ ಮಲಬಾರ್ ಕ್ರಿಶ್ಚಿಯನ್ ಅಸೋಸಿಯೇಷನ್ (ಕೆ ಎಸ್ಎಂಸಿಎ) ಸಂಸ್ಥೆಯು ಬೆಳ್ತಂಗಡಿ ಬಿಷಪ್ ಮಾರ್ ಲಾರೆನ್ಸ್ ಮುಕ್ಕುಯಿ ನೇತೃತ್ವದಲ್ಲಿ ನೆರೆ ಪರಿಹಾರ ಸಂಗ್ರಹಿಸಿತ್ತು. ಸಂಗ್ರಹವಾದ 7 ಲೋಡ್ ಸಾಮಾಗ್ರಿಗಳನ್ನು ಲಾರಿಗಳ ಮೂಲಕ ರವಾನಿಸಲಾಗಿದೆ. ಕೇರಳ ರಾಜ್ಯದ ವಯನಾಡ್ ಹಾಗೂ ಮಾನಂದವಾಡಿಗೆ ಬೆಳ್ತಂಗಡಿಯಿಂದ ಲಾರಿ ಮೂಲಕ ರವಾನೆ ಮಾಡಲಾಗಿದೆ. ಅಕ್ಕಿ, […]

ಸುಳ್ಯದಲ್ಲಿ ಭೂಕುಸಿತ ಇಬ್ಬರು ಮೃತ, ಮೂರು ಮಂದಿ ನಾಪತ್ತೆ

Saturday, August 18th, 2018
sullia

ಸುಳ್ಯ :  ಶುಕ್ರವಾರ ಸಂಭವಿಸಿದ ಭೂಕುಸಿತದಿಂದಾಗಿ ಮಾಣಿ-ಮೈಸೂರು ಹೆದ್ದಾರಿ ಮಧ್ಯೆದಲ್ಲಿರುವ ಜೋಡುಪಾಲ ಎಂಬಲ್ಲಿ ರಸ್ತೆಯು ಇಬ್ಭಾಗವಾಗಿದೆ. ಇಬ್ಬರು ಮೃತಪಟ್ಟಿದ್ದು, ಅಲ್ಲದೆ 3 ಮಂದಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ . ರಾಷ್ಟ್ರೀಯ ವಿಪತ್ತು ನಿಗ್ರಹ ದಳದ 26 ಮಂದಿ, 50ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ, ಅಗ್ನಿ ಶಾಮಕ  ಸಿಬ್ಬಂದಿ ಹಾಗೂ 100ಕ್ಕೂ ಅಧಿಕ ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಭೂ ಕುಸಿತದಿಂದಾಗಿ ಮೂರು ಮನೆಗಳು ಮಳೆಯಲ್ಲಿ ಕೊಚ್ಚಿಹೋಗಿವೆ. ಮಳೆಯು ಕಾರ್ಯಚರಣೆಗೆ ಅಡ್ಡಿಪಡಿಸುತ್ತಿದ್ದು ಅಲ್ಲದೆ ಹೆಲಿಕಾಪ್ಟರ್ ಮೂಲಕವು […]

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟುವುದು ಕಷ್ಟಕರವಾಗಿದ್ದರೂ ಕೂಡ ಕಟ್ಟೆ ತೀರುತ್ತೇವೆ: ಮಂಜುನಾಥ್ ಗೌಡ

Saturday, August 18th, 2018
shivmogga

ಶಿವಮೊಗ್ಗ: ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟುವುದು ಕಷ್ಟಕರವಾಗಿದ್ದರೂ ಕೂಡ ಕಟ್ಟೆ ತೀರುತ್ತೇವೆ ಎಂದು ಜೆಡಿಎಸ್ನ ನೂತನ ಜಿಲ್ಲಾಧ್ಯಕ್ಷ ಡಾ.ಆರ್.ಎಂ. ಮಂಜುನಾಥ್ ಗೌಡ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಇಲ್ಲಿ ಜೆಡಿಎಸ್ಗೆ ಉತ್ತಮ ಭವಿಷ್ಯವಿದೆ. ಈ ಹಿಂದೆ ಪಕ್ಷವನ್ನು ಬಿಟ್ಟು ಹೋದವರನ್ನು ಮತ್ತೆ ಕರೆತಂದು ಪಕ್ಷ ಕಟ್ಟುತ್ತೇವೆ ಎಂಬ ಭರವಸೆ ವ್ಯಕ್ತಪಡಿಸಿದರು. ಜೆ.ಹೆಚ್. ಪಟೇಲರ ಕಾಲದಲ್ಲಿ ಜನತಾ ಪಕ್ಷ ನಗರ ಸಭೆ ಹಾಗೂ ಜಿ.ಪಂ.ಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಈಗಲೂ ಕೂಡ ಜಿ.ಪಂ. ಹಾಗೂ ಮಹಾನಗರ ಪಾಲಿಕೆ ಜೆಡಿಎಸ್ […]

ಬಿಬಿಎಂಪಿಯಿಂದ ಕೊಡಗು-ಕೇರಳಕ್ಕೆ ಮೂರುವರೆ ಕೋಟಿ ರೂ. ಸಹಾಯಧನ

Saturday, August 18th, 2018
bengaluru

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೊಡಗು ಹಾಗೂ ಕೇರಳಕ್ಕೆ ಅಗತ್ಯ ವಸ್ತುಗಳು, ಶೆಡ್ ನಿರ್ಮಾಣ ಸೇರಿದಂತೆ ಹಣದ ರೂಪದಲ್ಲಿ ಸಹಾಯ ಮಾಡಲು ಮುಂದಾಗಿದೆ. ಬಿಬಿಎಂಪಿ ವತಿಯಿಂದ 2 ಕೋಟಿ ಪರಿಹಾರ ನಿಧಿ, ಹಾಗೂ ಪಾಲಿಕೆ ಸದಸ್ಯರ ಒಂದು‌ ತಿಂಗಳ ಗೌರವಧನ, ನೌಕರರ ಒಂದು ದಿನದ ವೇತನ ನೀಡಲು ತೀರ್ಮಾನಿಸಿದ್ದು ಒಟ್ಟು ಮೂರುವರೇ ಕೋಟಿ ರುಪಾಯಿ ನೀಡಲು ಬಿಬಿಎಂಪಿ ಮುಂದಾಗಿದೆ. ಇದರಲ್ಲಿ ಕೇರಳಕ್ಕೆ ಒಂದು ಕೋಟಿ, ಕೊಡಗಿಗೆ ಎರಡೂವರೆ ಕೋಟಿ ನೀಡಲು ತೀರ್ಮಾನಿಸಲಾಗಿದೆ. ಇನ್ನು ಪಾಲಿಕೆ ಕೇಂದ್ರ […]

ಚಾರ್ಮಾಡಿ ಘಾಟ್​ನಲ್ಲಿ ಟ್ರಾಫಿಕ್ ಜಾಮ್..!

Saturday, August 18th, 2018
charmadi-ghat

ಚಿಕ್ಕಮಗಳೂರು: ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಮೂಡಿಗೆರೆ ತಾಲೂಕಿನಲ್ಲಿರುವ ಚಾರ್ಮಾಡಿ ಘಾಟ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸುಮಾರು 5 ಕಿಮೀ‌ ವರೆಗೂ ವಾಹನಗಳು ಸಾಲು ಗಟ್ಟಿ ನಿಂತಿವೆ. ವಾಹನಗಳು ಕೊಟ್ಟಿಗೆಹಾರದ ಬಳಿ ವಾಪಸ್ ‌ತೆರಳುತ್ತಿವೆ. ದಟ್ಟ ಮಂಜು ಹಾಗೂ ತುಂತುರು ಮಳೆಯಿಂದಾಗಿ ಪ್ರಯಾಣಿಕರು ಕಂಗಾಲಾಗಿದ್ದು, ಮಂಗಳೂರು-ಧರ್ಮಸ್ಥಳ ಕಡೆ ತೆರಳುವ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ. ಶಿರಾಡಿ‌ ಘಾಟ್ ರಸ್ತೆ ಬಂದ್ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಚಾರ್ಮಾಡಿಯಲ್ಲಿ ಭಾರೀ ವಾಹನಗಳು ಸಂಚರಿಸುತ್ತಿವೆ. ಹೀಗಾಗಿ ವಾಹನದಟ್ಟಣೆಯೂ ಹೆಚ್ಚಿದೆ.

ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್​ಖಾನ್​ ಪ್ರಮಾಣ ಸ್ವೀಕಾರ..!

Saturday, August 18th, 2018
imran-khan

ಇಸ್ಲಾಮಾಬಾದ್: ಪಿಟಿಐ ಪಕ್ಷದ ನೇತಾರ, ಮಾಜಿ ಕ್ರಿಕೆಟರ್ ಇಮ್ರಾನ್ಖಾನ್ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಪಾಕಿಸ್ತಾನದ ಅಧ್ಯಕ್ಷ ಮ್ಯಾಮ್ನೂನ್ ಹುಸೇನ್ ಅವರು ಇಮ್ರಾನ್ ಖಾನ್ ಪ್ರಮಾಣವಚನ ಬೋಧಿಸಿದರು. 1992ರ ವಿಶ್ವಕಪ್ ಎತ್ತಿಹಿಡಿದಿದ್ದ ಇಮ್ರಾನ್ ಖಾನ್ ಇದೀಗ ಪಾಕ್ನ ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ. ಶುಕ್ರವಾರ ನಾಷನಲ್ ಅಸೆಂಬ್ಲಿಯಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಇಮ್ರಾನ್ ಖಾನ್, ತಮ್ಮ ಪ್ರತಿಸ್ಪರ್ಧಿ ಪಿಎಂಎಲ್ ನವಾಜ್( ಎನ್) ಶಹಬಾಜ್ ಶರೀಫ್ ಅವರನ್ನ 80 ಮತಗಳಿಂದ ಸೋಲಿಸಿ ಪ್ರಧಾನಿ ಪಟ್ಟಕ್ಕೆ ಏರಿದ್ದಾರೆ. ನಿನ್ನೆ ಪಾಕ್ […]

ಚಿಕ್ಕಮಗಳೂರಲ್ಲಿ ಕಾರದ ಪುಡಿ ಎರಚಿ ಮಹಿಳೆಯ ಬರ್ಬರ ಹತ್ಯೆ

Saturday, August 18th, 2018
dies-lady

ಚಿಕ್ಕಮಗಳೂರು: ಕಾರದ ಪುಡಿ ಎರಚಿ ಮಹಿಳೆಯೊಬ್ಬರನ್ನು ಕೊಲೆ ಮಾಡಿರುವ ಘಟನೆ ತರೀಕೆರೆ ತಾಲೂಕಿನಲ್ಲಿ ದುಗ್ಲಾಪುರ ಕ್ವಾಟ್ರಸ್ ಬಳಿ ನಡೆದಿದೆ. ಶಾರದಮ್ಮ (55) ಕೊಲೆಯಾದ ಮಹಿಳೆ ಎಂದು ತಿಳಿಸದು ಬಂದಿದೆ. ಶಾರದಮ್ಮ ಮೇಲೆ ಕಲ್ಲು ಎತ್ತಿ ಹಾಕಿ ನಿನ್ನೆ ರಾತ್ರಿ ಕೊಲೆ ಮಾಡಲಾಗಿದೆ. ಮಗಳ ಮಕ್ಕಳೊಂದಿಗೆ ಮೃತ ಶಾರದಮ್ಮ ವಾಸವಾಗಿದ್ದರು. ನಿನ್ನೆ ಶಾರದಮ್ಮಳನ್ನು ಬಿಟ್ಟು ತಾಯಿ ಮನೆಗೆ ಮಕ್ಕಳು ಹೋಗಿದ್ದಾಗ ಕೊಲೆ ನಡೆದಿದೆ. ಇನ್ನು ಮೃತ ಶಾರದಮ್ಮ ಬಡ್ಡಿ ವ್ಯವಹಾರ ನಡೆಸುತ್ತಿದ್ದರು. ಹಣದ ವ್ಯವಹಾರದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದು […]

ಸಂಪಾಜೆ ಬಳಿ ಭಾರೀ ಭೂ ಕುಸಿತ..3 ಮನೆ ಧ್ವಂಸ!

Saturday, August 18th, 2018
road

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶ ಸಂಪಾಜೆ ಬಳಿ ಭಾರೀ ಭೂ ಕುಸಿತ ಆಗಿ, 3 ಮನೆಗಳು ಧ್ವಂಸಗೊಂಡಿವೆ. ಮಣ್ಣಿನಡಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಹಾಗೂ ಮಹಿಳೆಯೊಬ್ಬರು ಮಣ್ಣಿನಡಿಗೆ ಸಿಲುಕಿರುವ ಶಂಕೆ ಇದೆ. ಮಣ್ಣಿನಡಿಗೆ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ಆರಂಭವಾಗಿದೆ. ಸಂಪಾಜೆಯಿಂದ ಮಡಿಕೇರಿಗೆ ಸಾಗುವ ಮಾರ್ಗ ಮದ್ಯದ ಜೋಡುಪಾಲ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಗುರುವಾರ ಸಂಜೆಯಿಂದ ಗುಡ್ಡ ಮೇಲಿನಿಂದಲೇ ಜಾರತೊಡಗಿತ್ತು. ಶುಕ್ರವಾರದಂದು ಏಕಾಏಕಿ ಗುಡ್ಡ ಜರುಗಿದೆ. ಈ ಪರಿಣಾಮ ಮೂರು ಮನೆಗಳು […]

ಜಿಲ್ಲೆಯಲ್ಲಿ ಮಳೆ ನಿಂತರೂ ನಿಲ್ಲದ ಭೂಕುಸಿತ..!

Saturday, August 18th, 2018
chik-magaluru

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ ನಿಂತರು ಭೂ ಕುಸಿತ ನಿಲ್ಲುತ್ತಿಲ್ಲ. ಮಳೆ ನಿಂತ ಬಳಿಕ ಮಲೆನಾಡಲ್ಲಿ ಭಾರೀ ಗಾಳಿ ಬೀಸುತ್ತಿದೆ. ಕೊಪ್ಪ ತಾಲೂಕಿನ ಶಾನುವಳ್ಳಿಯಲ್ಲಿ ಬಾವಿ ಕುಸಿದು ಸುರಂಗ ಸೃಷ್ಟಿಯಾಗಿದೆ. ಪ್ರೇಮಾ ಶೆಟ್ಟಿ ಎಂಬುವರಿಗೆ ಸೇರಿದ ಬಾವಿ ಕುಸಿದಿದ್ದು, ಸುರಂಗ ನಿರ್ಮಾಣವಾಗಿದೆ.